ನಾಯಕರಾದ ಯಡಿಯೂರಪ್ಪಗೆ ತಂದೆ ಸ್ಥಾನ, ಶ್ರೀರಾಮುಲುಗೆ ಮಗನ ಸ್ಥಾನ ನೀಡಿದ ಶಾಸಕ ಜನಾರ್ಧನರೆಡ್ಡಿ!

ಬಿಜೆಪಿ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನಾನು ತಂದೆ ಸ್ಥಾನವನ್ನು ನೀಡುತ್ತೇನೆ. ಅದೇ ರೀತಿ ನಾನು ಮಗುವಿನಂತೆ ಬೆಳೆಸಿದ ಶ್ರೀರಾಮುಲು ಅವರಿಗೆ ಎಂದಿಗೂ ಭೇದಭಾವ ಮಾಡುವುದಿಲ್ಲ ಎಂದು ಶಾಸಕ ಜನಾರ್ಧನರೆಡ್ಡಿ ಹೇಳಿದರು. ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ  ಘೋಷಣೆಯ ದಿನವೇ ಹೇಳಿದ್ದೆನು. ಅದೇ ರೀತಿಯಾಗಿ ಇನ್ನುಮುಂದೆಯೂ ರಾಜಕಾರಣದಲ್ಲಿ ನಾನು ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೇ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ ಎಂದು ಎಂದು ಕೆಆರ್‌ಪಿಪಿ ಶಾಸಕ ಜನಾರ್ಧನರೆಡ್ಡಿ ಹೇಳಿದರು.ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಾಳೆ ಬೆಳಗ್ಗೆ ಬಿಜೆಪಿ ಕಚೇರಿಗೆ ಬರೋಕೆ ಹೇಳಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ. ಲೋಕಸಭಾ ಚುನಾವಣೆ ‌ನಿಲ್ಲುವ ವಿಚಾರ ಇಲ್ಲ. ಇನ್ನು ಶ್ರೀರಾಮುಲುಗೆ ಬೆಂಬಲ ನೀಡುವ ವಿಚಾರ ಹಾಗೂ ಬಳ್ಳಾರಿಯಿಂದ ದೂರ ಉಳಿದಿದಕ್ಕೆ ಸಾಕಷ್ಟು ಚರ್ಚೆ ಆಯ್ತು. ಆದರೆ, ನಾನು ಪಕ್ಷ ಘೋಷಣೆ ಮಾಡುವ  ಮೊದಲ ದಿನ ಹೇಳಿದಂತೆ, ಯಡಿಯೂರಪ್ಪ ತಂದೆ ಸ್ಥಾನದ ಗೌರವ ನೀಡುತ್ತೇನೆ. ಅದೆ ರೀತಿಯಲ್ಲಿ ಶ್ರೀರಾಮುಲು ಅವರನ್ನು ಮಗು ರೀತಿಯಲ್ಲಿ ಬೆಳೆಸಿದ್ದೇವೆ. ಮುಂದೆ ಸಹ ಭೇದಭಾವ ಇರಲ್ಲ. ನಾನು ಮತ್ತೆ ತಾಯಿ ಬಿಜೆಪಿ ಮಡಲಿಗೆ ಸೇರ್ಪಡೆ ಆಗುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಮೋದಿ ಪ್ರಧಾನಿ ಆಗಲು ಶ್ರಮ ಪಡುತ್ತೇವೆ ಎಂದರು

Leave a Reply

Your email address will not be published. Required fields are marked *