ಚುನಾವಣೆಗಾಗಿ ನಮಗೆ ಹೈಕಮಾಂಡ್‌ನಯಾ ಪೈಸೆ ಹಣ ಕೇಳಿಲ್ಲ. ಈ ವಿಚಾರದಲ್ಲಿ ಬಿಜೆಪಿ ಆರೋಪ ನಿರಾಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸುದ್ದಿಗಾರರ ಜತೆಗೆ ಮಾತನಾಡಿ ಗುತ್ತಿಗೆದಾರನನ್ನು ಬಿಜೆಪಿ ಗುತ್ತಿಗೆದಾರ, ಕಾಂಗ್ರೆಸ್ ಗುತ್ತಿಗೆದಾರ ಎಂದು ಹೇಳಲು ಆಗುತ್ತದೆಯೇ? ಐಟಿ ದಾಳಿಗೊಳಗಾದವನು ಬಿಜೆಪಿ ಗುತ್ತಿಗೆದಾರ ಎಂದು ಈಗ ನಾನು ಹೇಳುತ್ತೇನೆ. ಅದನ್ನು ಯಾರು ಒಪ್ಪಿಕೊಳ್ಳುತ್ತಾರೆ? ಪಂಚ ರಾಜ್ಯಗಳ ಚುನಾವಣೆಗೂ ನಮಗೂ ಏನ್‌ಸಂಬಂಧ? ನಾವೇನಾದರೂ ಕರ್ನಾಟಕದ ಚುನಾವಣೆಗೆ ಹೋಗಿ ಯಾರಾನ್ನಾದರೂ ಹಣ ಕೇಳಿದ್ದೆವಾ? ಈಗ ಅವರಿಗೆ ಕೊಡಬೇಕು ಇವರಿಗೆ ಕೊಡಬೇಕು ಅನ್ನುವ ಆರೋಪದಲ್ಲಿ ಅರ್ಥವೇ ಇಲ್ಲ. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಇದು ಸರ್ಕಾರದ ದುಡ್ಡು ಎಂದು ಐಟಿ ಏನಾದರೂ ಹೇಳಿದೆಯಾ? ಐಟಿ ಏನಾದರೂ ಸರ್ಕಾರದ ಮೇಲೆ ಆರೋಪ ಮಾಡಿದೆಯಾ? ಇದರ ಬಗ್ಗೆ ನಾವೇಕೆ ತನಿಖೆ ಮಾಡಬೇಕು? ಐಟಿ ದಾಳಿಗಳು ನಡೆಯುವುದು ಸಾಮಾನ್ಯ. ಈಗ ನಡೆದಿರುವ ದಾಳಿ ಕೂಡ ಅದರ ಒಂದು ಭಾಗ. ಇದನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಅಷ್ಟೇ ಎಂದು ಹೇಳಿದರು.