ಬಿಜೆಪಿ ಕಾರ್ಯಕರ್ತರೇ ವೇಷ, ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡ್ತಾರೆ ಇದೆಲ್ಲ ಅವರ ಹುಟ್ಟುಗುಣ: ರಾಮಲಿಂಗಾರೆಡ್ಡಿ

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಶಿವಮೊಗ್ಗದಲ್ಲಿ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಕಿತಾಪತಿ ಮಾಡಿ ಕಿತ್ತಾಟ ತಂದಿಡುವ ಕೆಲಸವನ್ನು ಯಾವಾಗಲೂ ಮಾಡುತ್ತಾರೆ. ಕೋಮುಗಲುಭೆ ಮಾಡಿಸುವುದು ಜಗಳ ಮಾಡಿಸುವುದು ಹಾಗೂ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಕೆಲಸವನ್ನ ಮೊದಲಿನಿಂದಲೂ ಬಿಜೆಪಿಗರು ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‍ಗಿರಿ, ಗಲಾಟೆ ಮಾಡುವುದು ಹೊಡೆಯುವುದು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆಲ್ಲ ಬಿಜೆಪಿ ಕಾರ್ಯಕರ್ತರೇ ವೇಷ ಹಾಗೂ ಹೆಸರು ಬದಲಿಸಿಕೊಂಡು ಕಿಡಿಗೇಡಿತನದಲ್ಲಿ ಭಾಗಿಯಾಗುತ್ತಾರೆ. ಇದೆಲ್ಲ ಈ ರೀತಿ ಗಲಾಟೆ ಹಾಗೂ ಗಲಭೆ ಮಾಡಿಸುವುದು ಅವರ ಹುಟ್ಟುಗುಣ, ರಕ್ತದಲ್ಲೇ ಅವರಿಗೆ ಇದೆಲ್ಲ ಬಂದು ಬಿಟ್ಟಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *