ಬೆಂಗಳೂರು ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಸರ್ಕಾರ ಬಿಗ್ ಶಾಕ್ ನೀಡಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ 485 ಕೋಟಿ ರೂ. ಅನುದಾನವನ್ನು ವಾಪಸ್ ಪಡೆದಿದೆ. ಬಿಜೆಪಿ ಶಾಸಕರ ಅನುದಾನ ವಾಪಸ್ ಪಡೆದು ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಮರು ಹಂಚಿಕೆ ಮಾಡಿದೆ. ಕಾಂಗ್ರೆಸ್‌ನ 11 ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ಗೂ ಅನುದಾನ ಹಂಚಿಕೆ ಮಾಡಿದ್ದು, ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹಿನ್ನಲೆ ಅನುದಾನ ಬಿಡುಗಡೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ. ಬಿಜೆಪಿ ಶಾಸಕರ ಅನುದಾನದ ಪೈಕಿ ಆರ್‌ಆರ್ ನಗರ ಕ್ಷೇತ್ರದ ಅನುದಾನಕ್ಕೆ ಹೆಚ್ಚು ಕೊಕ್ಕೆ ಬಿದ್ದಿದೆ. ಆರ್‌ಆರ್ ನಗರ ಕ್ಷೇತ್ರದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಅನುದಾನ ವಾಪಸ್ ಪಾಲಿಟಿಕ್ಸ್ ಶುರು ಮಾಡಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಆರ್‌ಆರ್ ನಗರ ಕ್ಷೇತ್ರದ ಅನುದಾನ ಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಈಗ ವಿವಿಧ ಕಾಮಗಾರಿಗೆ ಬಿಡುಗಡೆ ಆಗಿದ್ದ ಅನುದಾನಕ್ಕೂ ಕತ್ತರಿ ಹಾಕಿದೆ. ಬಸವರಾಜ ಬೊಮ್ಮಾಯಿ ಸರ್ಕಾರ ಆರ್‌ಆರ್ ನಗರಕ್ಕೆ ನೀಡಿದ್ದ 126 ಕೋಟಿ ರೂ. ವಾಪಸ್ ಪಡೆದು ಆದೇಶ ಹೊರಡಿಸಿದೆ. ಮಳೆಗಾಲುವೆಯ 15 ಕೋಟಿ ರೂ. ಕಾಮಗಾರಿ ಟೆಂಡರ್ ಆಗಿದ್ದರೂ ಅನುದಾನ ವಾಪಸ್ ಪಡೆಯಲಾಗಿದೆ. ಚುನಾವಣೆ ಘೋಷಣೆಗೆ ಕೆಲವು ದಿನಗಳಿರುವಾಗ ಮಂಜೂರಾಗಿದ್ದ 41 ಕೋಟಿ ರೂ. ವಾಪಸ್ ಪಡೆಯಲಾಗಿದೆ. ಬಿಇಎಲ್ ಸರ್ಕಲ್ – ಗಂಗಮ್ಮ ಸರ್ಕಲ್‌ವರೆಗಿನ ರಸ್ತೆ ಅಗಲೀಕರಣಕ್ಕೂ ಬ್ರೇಕ್ ಹಾಕಿದ್ದು, ರಸ್ತೆ ಅಗಲೀಕರಣಕ್ಕೆ ಮಂಜೂರಾಗಿದ್ದ 70 ಕೋಟಿ ರೂ. ವಾಪಸ್ ಪಡೆಯಲಾಗಿದೆ.
ಯಾರ ಕ್ಷೇತ್ರಕ್ಕೆ ಎಷ್ಟು ಹಂಚಿಕೆ? ಹೆಬ್ಬಾಳ – 40 ಕೋಟಿ ರೂ. (39 ಕಾಮಗಾರಿಗಳು)ಪುಲಕೇಶಿನಗರ – 40 ಕೋಟಿ ರೂ. (39 ಕಾಮಗಾರಿ)ಸರ್ವಜ್ಞ ನಗರ – 40 ಕೋಟಿ ರೂ. (27 ಕಾಮಗಾರಿ)ಶಿವಾಜಿನಗರ – 40 ಕೋಟಿ ರೂ. (7 ಕಾಮಗಾರಿ)ಚಾಮರಾಜಪೇಟೆ – 40 ಕೋಟಿ ರೂ. (24 ಕಾಮಗಾರಿ)ಗಾಂಧಿ ನಗರ – 40 ಕೋಟಿ ರೂ. (10 ಕಾಮಗಾರಿ)ಗೋವಿಂದರಾಜ ನಗರ – 40 ಕೋಟಿ ರೂ. (20 ಕಾಮಗಾರಿ)
ಬಿಟಿಎಮ್ ಲೇಔಟ್ – 40 ಕೋಟಿ ರೂ. (40 ಕಾಮಗಾರಿ)ವಿಜಯನಗರ – 40 ಕೋಟಿ ರೂ. (20+ ಕಾಮಗಾರಿ)ಬ್ಯಾಟರಾಯನಪುರ – 40 ಕೋಟಿ ರೂ. (22 ಕಾಮಗಾರಿ)ಯಶವಂತಪುರ- 40 ಕೋಟಿ ರೂ. (18 ಕಾಮಗಾರಿ)