ಬೆಳಗಾವಿಯನ್ನು ಮಾರಲು “ಸಿದ್ದ”ವಾಗಿದೆ ಕಾಂಗ್ರೆಸ್ ಸರ್ಕಾರ: ಬಿಜೆಪಿ ವಾಗ್ದಾಳಿ

ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಸಂಪುಟದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಂದ ಹೇಳಿಸುವ ಮೂಲಕ, ಬೆಳಗಾವಿ ಬಗ್ಗೆ ತಮ್ಮ ಸರ್ಕಾರದ ನಿಲುವು ಏನು ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಬೆಳಗಾವಿಯನ್ನು ಮಾರಲು “ಸಿದ್ದ”ವಾಗಿದೆ ಕಾಂಗ್ರೆಸ್ ಸರ್ಕಾರ ಎಂದು.ಈ ಕುರಿತು ಬುಧವಾರ ಟ್ವೀಟ್‌ ಮೂಲಕ ಕಿಡಿಕಾರಿರುವ ಬಿಜೆಪಿ, ಕನ್ನಡಿಗರನ್ನು ಒಡೆಯುವ, ಕರ್ನಾಟಕವನ್ನು ವಿಭಜಿಸುವ ಕರ್ನಾಟಕ ಕಾಂಗ್ರೆಸ್‌ ಕ್ಷುಲ್ಲಕ ಮನಸ್ಥಿತಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಾಡದ್ರೋಹಿ ಹೇಳಿಕೆ ಆರುವ ಮುನ್ನವೇ ಬೆಳಗಾವಿಯಲ್ಲಿ ದಾಖಲೆ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ ಎಂದು ಬಿಜೆಪಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮಗೆ ಕನ್ನಡದ ಅಸ್ಮಿತೆ, ಕೇವಲ ಚುನಾವಣೆಯ ವಿಷಯ ಎಂಬುದು ಸಾಬೀತಾಗಿದೆ, ದೆಹಲಿಯ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಲು ಬೆಳಗಾವಿಯನ್ನೇ ಮಾರಲು ಹೊರಟಿರುವುದು ನಾಚಿಕೆಗೇಡು.ಮಜವಾದಿ ಸರ್ಕಾರ ಮಜಾ ಉಡಾಯಿಸುತ್ತಾ ಕರ್ನಾಟಕದ ಹಿತಾಸಕ್ತಿಯನ್ನು ಮರೆತಿದೆ. ಕರ್ನಾಟಕದ ಆಸ್ಮಿತೆಯನ್ನು ಹಾಳು ಮಾಡಲೆಂದೇ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಮಾಡುತ್ತಿರುವ ನಾಡ ದ್ರೋಹಿ ಕೃತ್ಯಗಳು ಇವು ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ತಿಳಿಸಿದೆ.


Leave a Reply

Your email address will not be published. Required fields are marked *