ಭಾಷಣದ ವೇಳೆ Emergency Alert Message- ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗುವ ಮೂಲಕ ಟಾಂಗ್ ಕೊಟ್ಟಿದ್ದಾರೆ.ಡಿ.ಕೆ ಶಿ

ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೊಬೈಲ್‍ಗೆ ಬೀಪ್ ಶಬ್ದದ ಜೊತೆ ಅಲರ್ಟ್ ಮೆಸೇಜ್ ಬಂದಿದೆ. ಇಂದು ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಟ್ರಯಲ್ ಮೆಸೇಜ್ ಬಂದಿದೆ. ಡಿಕೆಶಿ ಮೊಬೈಲ್ ಸೇರಿ ಏಕಕಾಲಕ್ಕೆ ಹತ್ತಾರು ಮೊಬೈಲ್ ಗಳು ಸದ್ದು ಮಾಡಿವೆ. ಕೇಂದ್ರ ಸರ್ಕಾರದಿಂದ ವಿಕೋಪ ಎಚ್ಚರಿಕೆ ನೀಡುವ ಮೊಬೈಲ್ ಅಲರ್ಟ್ ಮೆಸೇಜ್ ಸದ್ದಿಗೆ ಕೈ ನಾಯಕರು ಕೊಂಚ ಗಲಿಬಿಲಿಯಾಗಿದ್ದಾರೆ. ಕೂಡಲೇ ಮಾಧ್ಯಮದವರು ವಿಕೋಪ ಮಾಹಿತಿ ಅಲಾರಂ ಎಂದು ಮಾಹಿತಿ ನೀಡಿದರು. ಈ ವೇಳೆ ಡಿಕೆಶಿ ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *