ಮಂಕಿಪಾಕ್ಸ್: ಕರ್ನಾಟಕ ರಾಜ್ಯಕ್ಕೆ ಬಂದೊದಗಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

ಕರ್ನಾಟಕದಲ್ಲಿ ಮೂರನೇ ಮಂಕಿಪಾಕ್ಸ್ ಶಂಕಿತ ವ್ಯಕ್ತಿಯ ವರದಿ ನೆಗಟಿವ್ ಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಮೂರು ಮಂಕಿಪಾಕ್ಸ್ ಶಂಕಿತ ಪ್ರಕರಣಗಳ ವರದಿ ನೆಗಟಿವ್ ಆಗಿದ್ದು, ರಾಜ್ಯಕ್ಕೆ ಬಂದೊದಗಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.
ಬೆಲ್ಜಿಯಂನಿಂದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡುನಲ್ಲಿರುವ ಟಿಬೆಟಿಯನ್ ಕ್ಯಾಂಪ್ಗೆ ಬಂದಿದ್ದ 9 ವರ್ಷದ ಟಿಬೆಟಿಯನ್ ಬಾಲಕನಿಗೆ ಮಂಕಿಪಾಕ್ಸ್ ವರದಿ ನೆಗಟಿವ್ ಬಂದಿದೆ. ಈ ಬಾಲಕನ ಚರ್ಮದಲ್ಲಿ ದದ್ದು ಸೇರಿದಂತೆ ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಆತನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

Leave a Reply

Your email address will not be published. Required fields are marked *