ಚುನಾವಣಾ ಕಣದಲ್ಲಿರುವ ಮಿಜೋರಾಂನಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಭಾರತ ಸರ್ಕಾರ ಇಸ್ರೇಲ್‌ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಇಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ.ಮೇ ತಿಂಗಳಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಇನ್ನೂ ಮಣಿಪುರಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಮಣಿಪುರದ ಹಿಂಸಾಚಾರವು ಭಾರತದ ಕಲ್ಪನೆಯ ಮೇಲಿನ ಆಕ್ರಮಣ ಮತ್ತು ದೇಶದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಭಾರತ್ ಜೋಡೊ ಮೂಲಕ ನಾವು ದೇಶವನ್ನು ಒಂದುಗೂಡಿಸುತ್ತಿದ್ದೇವೆ ಎಂದರು.