ಮೈಸೂರಿನ ಸತ್ಯಮೂರ್ತಿ ಎಂಬಾತ. ಮಂಗಳವಾರ ಬೆಳಗ್ಗೆ ಸಿಎಂ ಮನೆಗೆ ಕಲ್ಲೆಸೆದಿದ್ದ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸತ್ಯಮೂರ್ತಿ ನಿನ್ನೆಯಷ್ಟೇ ಸಿಎಂ ಮನೆಗೆ ಬಂದಿದ್ದ. ಭಾನುವಾರ ಸಿಎಂ ಮೈಸೂರಿನ ಮನೆಯಲ್ಲಿದ್ದ ವೇಳೆ ಸಿಎಂ ಭೇಟಿಗೆ ಬಂದಿದ್ದ. ಸಿಎಂ ಭೇಟಿಗೆ ಬಂದಿದ್ದನ್ನ ತಾನೇ ಸೆಲ್ಫಿ ವೀಡಿಯೋ ಸಹ ಮಾಡಿದ್ದ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರ ಒಡೆದು ಹಾಕಿದ್ದ ದೃಶ್ಯ ಬಳಸಿ ಜೈಲರ್ ಸಿನಿಮಾ ಹಾಡನ್ನ ಮಿಕ್ಸ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ ಕೊಟ್ಟಿದ್ದ. ಇದೇ ಸತ್ಯಮೂರ್ತಿ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಕೂಡ ಮಾಡಿದ್ದ. ಈತ ಮಾನಸಿಕ ಅಸ್ವಸ್ಥ ಎಂದು ಈ ಹಿಂದೆ ಹೇಳಲಾಗಿತ್ತು. ಘಟನೆ ಸಂಬಂಧ ಪೊಲೀಸರಿಂದ ತೀವ್ರ ವಿಚಾರಣೆ ನಡೆಯುತ್ತಿದೆ. ಆರೋಪಿ ಸತ್ಯಮೂರ್ತಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.