ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿ ಸಂಸದ ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮಂದಿರದ ಜಾಗದಲ್ಲಿ 500 ವರ್ಷಗಳ ಕಾಲ ಮುಸ್ಲಿಮರು ನಮಾಜ್ ಮಾಡಿದ್ದಾರೆ ಎನ್ನುವ ಮೂಲಕ ಅವರು ವಿವಾದದ ಕಿಡಿ ಹೊತ್ತಿಸಿದ್ದಾರೆ.ಗೋಡ್ಸೆ ಗೋಲಿ ಹೊಡೆದಾಗ ಗಾಂಧಿ ‘ಹೇ ರಾಮ’ ಎಂದಿದ್ದರು. ಭಾರತದ ಮುಸ್ಲಿಮರಿಂದ ವ್ಯವಸ್ಥಿತವಾಗಿ ಬಾಬರಿ ಮಸೀದಿಯನ್ನು ಕಸಿದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ನಾನು ಹೇಳಿದ್ದೆ. ಇಂತಹ ಸಾಕಷ್ಟು ವಿಚಾರಗಳು ಮುಂದೆ ಹೊರಬರಲಿದೆ ಎಂದಿದ್ದೆ. ಈಗ ಸಂಘ ಪರಿವಾರ ಎಲ್ಲಾ ಕಡೆ ಹೋಗಿ ಇಲ್ಲಿ ಮಸೀದಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಆವತ್ತು ಜಿ.ಬಿ ಪಂತ್ ರಾಮನ ಮೂರ್ತಿ ತೆಗೆದಿಟ್ಟಿದ್ದರೆ, 1986 ಕೀಲಿ ತೆಗೆಯದೇ ಇದ್ದಿದ್ದರೆ ಹಾಗೂ ಬಾಬ್ರಿ ಮಸೀದಿ ಕೆಡವದೇ ಇದ್ದಿದ್ದರೆ ಇವತ್ತು ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ. ಇಷ್ಟೆಲ್ಲಾ ನಡೆದರೂ ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ದೆಹಲಿಯ ಮುಖ್ಯಮಂತ್ರಿ ಒಕ್ಕೂಟದಲ್ಲಿದ್ದೇವೆ ಎಂದು ಹೇಳಿ ಪ್ರತಿ ಗುರುವಾರ ಶಾಲೆಗಳಲ್ಲಿ ಸೂರಜ್ ಪಾಠ ಹಾಗೂ ಹನುಮಾನ್ ಚಾಲೀಸಾ ಪಠಣೆ ಮಾಡಲು ಹೇಳಿದ್ದಾರೆ. ಎಲ್ಲರಿಗೂ ಬಹುಸಂಖ್ಯಾತ ಮತಗಳ ಮೇಲೆ ಕಣ್ಣಿದೆ ಎಂದಿದ್ದಾರೆ.ನರೇಂದ್ರ ಮೋದಿ ಕೂಡ ಬಹುಸಂಖ್ಯಾತ ಮತಗಳ ಕ್ರೂಢಿಕರಣ ಮಾಡುತ್ತಿದ್ದಾರೆ. ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ ಎಂದು ಅವರು ತೋರಿಸಿದ್ದಾರೆ. ಈ ಮೂಲಕ ಭಾರತದ ಮುಸ್ಲಿಮರಿಗೆ ಮೋದಿ ಸಂದೇಶ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.