ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ – ರಾಮಭಕ್ತರು ಸಂಭ್ರಮಿಸದಂತೆ ರಾಜ್ಯ ಸರ್ಕಾರ ತಂತ್ರ ರೂಪಿಸಿದೆ ಬಿಜೆಪಿ ಗಂಭೀರ ಆರೋಪ

ಜ.22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ಅದ್ದೂರಿಯಾಗಿ ನೆರವೇರಲಿದೆ. ಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿ ಇಡೀ ದೇಶವೇ ಇರುವಾಗ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಕುತಂತ್ರ ಹೆಣೆಯುತ್ತಿದೆ ರಾಮಭಕ್ತರು ಸಂಭ್ರಮಿಸದಂತೆ ರಾಜ್ಯ ಸರ್ಕಾರ ತಂತ್ರ ರೂಪಿಸಿದೆ.ಎಂದು ಬಿಜೆಪಿ ಆರೋಪಿಸಿದೆ.ರಾಜ್ಯ ಕಾಂಗ್ರೆಸ್, ಅಯೋಧ್ಯೆಗೆ ಹೋಗುವವರಿಗೆ ಗೋಧ್ರಾ ಘಟನೆಯನ್ನು ನೆನಪಿಸಿ, ಅದೇ ರೀತಿಯ ಬೆದರಿಕೆ ಹಾಕಲಾಗಿದೆ. ಈ ಸಂಭ್ರಮದ ಶುಭ ಘಳಿಗೆ ವೇಳೆ ಕಾಂಗ್ರೆಸ್ ಸುಳ್ಳು ಸುದ್ಧಿ ಹಬ್ಬಿಸುವುದರಲ್ಲಿ ನಿರತವಾಗಿದೆ. ರಾಮ ಭಕ್ತರು ಸಂಭ್ರಮಿಸದಂತೆ 144 ಸೆಕ್ಷನ್ ಜಾರಿಗೆ ಸಿದ್ಧತೆ ನಡೆದಿದೆ. ರಾಮ ಮಂದಿರ ಉದ್ಘಾಟನೆಯ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತಗೊಳಿಸಲು ತಂತ್ರ ಹೆಣೆಯಲಾಗಿದೆ. ಮನೆ ಮನೆಯ ಟಿವಿ ಕೇಬಲ್ ಸಂಪರ್ಕ ತಪ್ಪಿಸುವ ದುರುದ್ದೇಶ ಕಾಂಗ್ರೆಸ್‍ದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರಾಮ ಬಂಟ ಹನುಮನ ನಾಡಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಎಕ್ಸ್‌ನಲ್ಲಿ ಬರೆದುಕೊಂಡಿದೆ.

Leave a Reply

Your email address will not be published. Required fields are marked *