ಶೀಘ್ರವೇ 403+ 660, 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಹುದ್ದೆಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ: ಪರಮೇಶ್ವರ್

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬಹಳ ದಿನಗಳಿಂದ ನಿರೀಕ್ಷೆ ಮಾಡಿದ್ದ PSI ಪರೀಕ್ಷೆ ಯಶಸ್ವಿಯಾಗಿ, ಸುಗಮವಾಗಿ ನಡೆದಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ಆಗಿಲ್ಲ. ಅಭ್ಯರ್ಥಿಗಳಿಗೆ ಯಾವುದೇ ಬ್ಲೂಟೂತ್ ಕೂಡಾ ತರಲು ಸಾಧ್ಯವಾಗಿಲ್ಲ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಆಗಿದ್ದರು. ಇದರಲ್ಲಿ 65% ರಿಂದ 70% ಹಾಜರಾತಿ ಇತ್ತು. ಆದಷ್ಟು ಮೌಲ್ಯಮಾಪನ ಮಾಡಿ ರಿಸಲ್ಟ್ ಕೊಟ್ಟು ನೇಮಕಾತಿ ಪ್ರಕ್ರಿಯೆ ಶುರು ಮಾಡುತ್ತೇವೆ ಎಂದಿದ್ದಾರೆ. ಮುಂದಿನ ಹಂತದಲ್ಲಿ 403 ಜನ PSI ನೇಮಕಾತಿಗೂ ಪರೀಕ್ಷೆ ಮಾಡುತ್ತೇವೆ. ಅದನ್ನು ಕೂಡಾ KEA ಮೂಲಕವೇ ಪರೀಕ್ಷೆ ನಡೆಸುತ್ತೇವೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡಿದ್ದಾರೆ. ಮುಂದೆಯೂ ಕೂಡಾ ಹೀಗೆ ಮಾಡಿದರೆ ಯಾವುದೇ ಗೊಂದಲ ಇರುವುದಿಲ್ಲ.PSI ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದಕ್ಕೆ KEA ಮತ್ತು ಅದರ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಈಗಾಗಲೇ 403 PSI ಹುದ್ದೆಗೆ ನೋಟಿಫಿಕೇಶನ್ ಮುಗಿದು, ದೈಹಿಕ ಪರೀಕ್ಷೆ ಕೂಡಾ ಮುಗಿದಿದೆ. ಇನ್ನೂ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. ಆದಷ್ಟು ಬೇಗ ಪರೀಕ್ಷೆ ನಡೆಸುತ್ತೇವೆ. ಮಂಗಳವಾರ ನಡೆದ ಪರೀಕ್ಷೆಯಲ್ಲಿ 500 ಮತ್ತೆ 403 ಹುದ್ದೆ ಸೇರಿ 900ಕ್ಕೂ ಹೆಚ್ಚು ಪೊಲೀಸ್ ಹುದ್ದೆ ಭರ್ತಿ ಆಗುತ್ತವೆ ಎಂದಿದ್ದಾರೆ.

Leave a Reply

Your email address will not be published. Required fields are marked *