ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ನನ್ನ ಎದುರು ಬಂದು ಮಾತನಾಡಲಿ ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್‌ನವರಿಗೆ ಸಭ್ಯತೆ, ಸಂಸ್ಕೃತಿ ಪಾಠ ಮಾಡ್ತೇನೆ: ಸಂಸದ ಅನಂತ ಕುಮಾರ ಹೆಗಡೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಅನಂತ ಕುಮಾರ ಹೆಗಡೆ, ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಸಿದ್ದರಾಮಯ್ಯ ಸೇರಿಂದತೆ ಕಾಂಗ್ರೆಸ್ ಎಲ್ಲ ನಾಯಕರು ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ, ಸಂಸ್ಕೃತಿ ಎಂದರೇನು ಅಂತಾ ನಾನು ಅವರಿಗೆ ಪಾಠ ಮಾಡ್ತೀನಿ  ಇದರ ಎಲ್ಲದರ ಬಗ್ಗೆ ನಾವಿಬ್ರೂ ಕುತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕುತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ. ಯಡಿಯೂರಪ್ಪನವರ ಬಗ್ಗೆ, ಮೋದಿಯವರ ಬಗ್ಗೆ ನಮ್ಮ ದೇವಸ್ಥಾನದ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದರು. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು? ನಮ್ಮ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಯಾರೆಲ್ಲಾ ಏನೇನ್ ಮಾತಾಡಿದಾರೆ ಹೇಳಬೇಕಾ.? ಎಂದು ಕಿಡಿಕಾರಿದರು.ಸಲ್ಮಾನ್ ಖುರ್ಷಿದ್ ಕಪ್ಪೆ, ಮಂಗ,  ನಪುಂಸಕ ಎಂದು  ಕರೆದರು. ಶರದ್ ಪವಾರ ಮೋದಿಯರನ್ನು ಹಿಟ್ಲರ್ ಅಂತಾ ಕರೆದರು. ಕಾಂಗ್ರೆಸ್ ಬಹುತೇಕ ನಾಯಕರು ಇವರನ್ನು ಹಿಟ್ಲರ್ ಎಂದು ಕರೆದರು. ಇದಕ್ಕೆಲ್ಲಾ ಮಿಡಿಯಾದೇ ದಾಖಲೆಗಳು ಇವೆ. ಇನ್ನು ಸಂಸ್ಕೃತಿ ಬಗ್ಗೆ ಹೇಳುವ ಸಿಎಂ ಸಿದ್ಧರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು.

Leave a Reply

Your email address will not be published. Required fields are marked *