ಸಿಎಂ ಜಗನ್‌ರಿಂದ ನಮ್ಮಪ್ಪನಿಗೆ ತೊಂದ್ರೆ ಆಗ್ತಿದೆ: ಅಮಿತ್‌ಶಾ ಮುಂದೆ ಅಳುತ್ತಲೇ ಅಳಲು ತೋಡಿಕೊಂಡ ಚಂದ್ರಬಾಬು ನಾಯ್ಡು ಪುತ್ರ,ನಾರಾ ಲೋಕೇಶ್

ಟಿಡಿಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಂದ್ರಬಾಬು ನಾಯ್ಡು ಅವರ ಪುತ್ರ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.ಆಂದ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನವಾಗಿ ಹಲವು ದಿನಗಳೇ ಕಳೆದಿವೆ. ಕೌಶಲ್ಯಾಭಿವೃದ್ಧಿ ನಿಗಮದ ಹಗರಣದಲ್ಲಿ ತಮ್ಮ ತಂದೆಯನ್ನು ಅಕ್ರಮವಾಗಿ ಬಂಧಿಸಲಾಗಿದೆ.ಅವರ ಬಂಧನಕ್ಕೆ ಸಿಎಂ ಜಗನ್‌ಮೋಹನ ರೆಡ್ಡಿ ಕಾರಣವೆಂದು ನಾಯ್ಡು ಕುಟುಂಬದವರು ಆರೋಪಿಸುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಜಗನ್ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಎಂದು ನಾಯ್ಡು ಪುತ್ರ, ಟಿಡಿಪಿ ನಾಯಕ ನಾರಾ ಲೋಕೇಶ್ ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ.73 ವರ್ಷದ ಚಂದ್ರಬಾಬು ನಾಯ್ಡು ವಿರುದ್ಧ ಹಲವು ಆರೋಪ ಹೊರಿಸಲಾಗಿದೆ. ಇಷ್ಟೊಂದು ಆರೋಪಗಳನ್ನು ಹೊರಿಸಿ ತೊಂದರೆ ಕೊಡುವುದು ಸರಿಯಲ್ಲ ಎಂಬುದಾಗಿ ನಾರಾ ಲೋಕೇಶ್‌ಮುಂದೆ ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *