2023ರ ಜಿಡಿಪಿ ದರ: ಚೀನಾಗೆ ಮತ್ತೆ ಶಾಕ್‌ ಭಾರತ ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ

ಹಲವು ಅಂತಾರಾಷ್ಟ್ರೀಯ ಅನಿಶ್ಚಿತೆಗಳ ಮಧ್ಯೆಯೂ 2023-24ರ ಹಣಕಾಸು ವರ್ಷದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಭಾರತ ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್‌ಹೇಳಿದೆ. ಐಎಂಎಫ್‌ಮಂಗಳವಾರ ಜಿಡಿಪಿ ಮುನ್ನೋಟವನ್ನು ಬಿಡುಗಡೆ ಮಾಡಿದೆ. 2023ರಲ್ಲಿ ಭಾರತದ ಜಿಡಿಪಿ ದರ 6.3% ಇದ್ದರೆ 2024ರಲ್ಲಿ 6.3% ದಾಖಲಿಸಬಹುದು ಎಂದು ಭವಿಷ್ಯ ನುಡಿದಿದೆ. ಈ ಹಿಂದೆ 2023-24ರ ಹಣಕಾಸು ವರ್ಷದಲ್ಲಿ ಭಾರತ 6.1% ಜಿಡಿಪಿ ದಾಖಲಿಸಬಹುದು ಎಂದಿದ್ದ ಐಎಂಎಫ್‌ಈಗ 20 ಬೇಸಿಸ್‌ಪಾಯಿಂಟ್‌ ಏರಿಕೆ ಮಾಡಿ ವರದಿ ಬಿಡುಗಡೆ ಮಾಡಿದೆ.ಇದೇ ಜಿಡಿಪಿ ಪ್ರಗತಿಯನ್ನು ಕಾಯ್ದುಕೊಂಡರೆ 2026ರಲ್ಲಿ ಜಪಾನ್‌, 2027ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಬಹುದು ಎಂದು ಐಎಂಫ್‌ಭವಿಷ್ಯ ನುಡಿದಿದೆ. ಚೀನಾದ ಜಿಡಿಪಿ ಬೆಳವಣಿಗೆ ದರವನ್ನು ಐಎಂಫ್‌ಇಳಿಕೆ ಮಾಡಿದೆ. ಈ ಹಿಂದೆ 5.2% ಎಂದಿದ್ದ ಐಎಂಫ್‌ಈಗ ದರವನ್ನು 5% ಇಳಿಸಿದೆ. ರಿಯಲ್‌ಎಸ್ಟೇಟ್‌ಕುಸಿತಗೊಂಡ ಹಿನ್ನೆಲೆಯಲ್ಲಿ ದರವನ್ನು ಇಳಿಕೆ ಮಾಡಿದೆ. 2024ರಲ್ಲಿ 4.2% ಜಿಡಿಪಿ ದಾಖಲಿಸಬಹುದು ಎಂದು ಹೇಳಿದೆ.

Leave a Reply

Your email address will not be published. Required fields are marked *