IPL ವೇದಿಕೆಯಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಡ್ಯಾನ್ಸ್ ಧಮಾಕ

17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ  ಅದ್ಧೂರಿಯಾಗಿ ಇಂದು  ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ , ಟೈಗರ್ ಶ್ರಾಫ್  ಡ್ಯಾನ್ಸ್ ಮೂಲಕ ರಂಗೇರಿಸಿದ್ದಾರೆ. ಹಿಂದಿ ಚಿತ್ರದ ಸುಂದರ ಹಾಡುಗಳಿಗೆ ಇಬ್ಬರೂ ಹೆಜ್ಜೆ ಹಾಕಿದ್ದಾರೆ.ಚೇಪಾಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದೆ.  ಸಮಾರಂಭ ಆರಂಭವಾಗಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹೆಜ್ಜೆ ಹಾಕುವ ಮೂಲಕ ಐಪಿಎಲ್ ಕ್ರಿಕೆಟ್ ಪ್ರೇಕ್ಷಕರಿಗೆ ರಂಜಿಸಿದ್ದಾರೆ. ವೇದಿಕೆಗೆ ಎಂಟ್ರಿ ಕೊಡುವಾಗಲೇ ತ್ರಿವರ್ಣ ಧ್ವಜ ಹಿಡಿದು ಅಕ್ಷಯ್‌ ಕುಮಾರ್‌ ಹೆಜ್ಜೆ ಹಾಕಿದ್ದಾರೆ. 

Leave a Reply

Your email address will not be published. Required fields are marked *